ಶ್ರೀ ಭೈರವೇಶ್ವರ ಫಿಲಂ ಪ್ಲಾನೆಟ್ ಅರ್ಪಿಸುವ ೯ ಥಾಟ್ ಸಿನಿಮಾಸ್ ಲಾಂಛನದಲ್ಲಿ ತರುಣ್ ಶಿವಪ್ಪ ನಿರ್ಮಾಣದ ರೋಜ್ ಚಿತ್ರಕ್ಕೆ ನಾಗರಬಾವಿಯ ಬುದ್ಧ ಪಾರ್ಕ್ನಲ್ಲಿ ನಾಯಕ ನಾಯಕಿ ೧೫೦ ಜನ ಸಹಕಲಾವಿದರೊಂದಿಗೆ ಓ ಮೈ ರೋಜ್, ಈ ಗುಲಾಬಿಯು ಸಾರಿರಿಸಾರಿ ಈ ಸಾರಿ ಸಾರಿರಿ ಅಂತ ಡಂಗೂರ ಸಾರ್ತೀನಿ ಈ ಹಾಡು ಕಲೈ ನೃತ್ಯ ನಿರ್ದೇಶನದಲ್ಲಿ ನಡೆಯಿತು. ಈ ಚಿತ್ರದ ರಚನೆ -ನಿರ್ದೇಶನ ಸಹನ ಹೆಚ್.ಎಸ್. ಛಾಯಾಗ್ರಹಣ - ಗುರುಪ್ರಶಾಂತ್ ರೈ, ಸಂಗೀತ-ಅನೂಪ್ ಸೀಳಿನ್, ಸಂಕಲನ-ಕೆ.ಎಂ.ಪ್ರಕಾಶ್, ನೃತ್ಯ - ಎ.ಹರ್ಷ-ಕಲೈ, ಸಾಹಸ-ಮಾಸ್ ಮಾದ, ಸಹನಿರ್ದೇಶನ - ಕೆ.ವಿಜಯ್ ಭದ್ರಾವತಿ, ನವೀನ್ ರೆಡ್ಡಿ, ರಿಷಿ ರಾಮಯ್ಯ, ನಿರ್ವಹಣೆ - ಸುಧೀಂದ್ರ ಹೊಸಳ್ಳಿ, ತಾರಾಗಣದಲ್ಲಿ - ಅಜಯ್ ರಾವ್, ಶ್ರಾವ್ಯ, ಚಂದ್ರಶೇಖರ್ (ಎಡಕಲ್ಲುಗುಡ್ಡದ ಮೇಲೆ), ಚಿ.ಗುರುದತ್, ಸಾದು ಕೋಕಿಲ, ಬುಲೆಟ್ ಪ್ರಕಾಶ್, ವಿಕ್ಟರಿ ವಾಸು, ಉಮೇಶ್ ಪುಂಗ, ವೆಂಕಟೇಶ್ ಪ್ರಸಾದ್, ಸುಧೀರ್, ರೋಹನ್ ಗೌಡ, ಮುಂತಾದವರಿದ್ದಾರೆ.